ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತ (ಕರ್ನಾಟಕ ಸರ್ಕಾರದ ಉದ್ಯಮ)

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

Back
ಸ್ವಾವಲಂಬಿ ಸಾರಥಿ ಯೋಜನೆ

Home

ಸ್ವಾವಲಂಬಿ ಸಾರಥಿ

 1. ಯೋಜನೆ ಉದ್ದೇಶ :

ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಗೆ ಸೇರಿದ ನಿರುದ್ಯೋಗಿ ಯುವಕರಿಗೆ ನಾಲ್ಕು ಚಕ್ರಗಳ ಲಘು ವಾಹನ ಖರೀದಿಸಲು ನಿಗಮಗಳಿಂದ ಸಹಾಯಧನ ಒದಗಿಸುವುದಾಗಿದೆ.

   2.ಯೋಜನೆಯಲ್ಲಿ ಪ್ರಯೋಜನ ಪಡೆಯಲು ಇರಬೇಕಾದ ಅರ್ಹತೆಗಳು:

 

 1. ಈ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಅಭ್ಯರ್ಥಿಯು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸಮುದಾಯಗಳಿಗೆ ಸೇರಿದವರಾಗಿರಬೇಕು.
 2. ಈ ಯೋಜನೆಯಲ್ಲಿ ಆರ್ಥಿಕ ಸಹಾಯ ಪಡೆಯಲು ಇಚ್ಚಿಸುವ ಅರ್ಜಿದಾರರು ಲಘು ವಾಹನ ಚಾಲನಾ ಪರವಾನಗಿಯನ್ನು ಹೊಂದಿರಬೇಕು
 3. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಿಗೆ ರೂ.98000/-ಗಳು ನಗರ ಪ್ರದೇಶದವರಿಗೆ ರೂ. 120000/-ಗಳನ್ನು ಮೀರಿರಬಾರದು.
 4. ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
 5. ಅರ್ಜಿದಾರರ ವಯಸ್ಸು ಕನಿಷ್ಠ 21 ವರ್ಷಗಳು ಹಾಗೂ ಗರಿಷ್ಠ 45 ವರ್ಷಗಳ ಮಿತಿಯೊಳಗಿರಬೇಕು.
 6. ಈ ಹಿಂದೆ ನಿಗಮದ ಯೋಜನೆಗಳಲ್ಲಿ ಅಥವಾ ಸರ್ಕಾರಿ ಇಲಾಖೆಗಳಲ್ಲಿ ಈ ಉದ್ದೇಶಕ್ಕೆ ಯಾವುದೇ ಯೋಜನೆಗಳಿಂದ ಸೌಲಭ್ಯ ಪಡೆದಿರಬಾರದು.
 7. ಈ ಯೋಜನೆಯಲ್ಲಿ ಸವಲತ್ತು ಪಡೆಯಬಯಸುವ ಅರ್ಜಿದಾರರು ವಾಸಿಸುತ್ತಿರುವ ವ್ಯಾಪ್ತಿಗೆ ಬರುವ ರಾಷ್ಟ್ರೀಕೃತ ಬ್ಯಾಂಕ್‌ ಶಾಖೆಯಲ್ಲಿ ಸರ್ಕಾರದ ಸೌಲಭ್ಯ ಪಡೆಯುವ ಆಧಾರ್‌ ಸಂಯೋಜಿತ ಬ್ಯಾಂಕ್‌ ಖಾತೆ ಹೊಂದಿರಬೇಕು.
 8. ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಸೌಲಭ್ಯ ಪಡೆಯತಕ್ಕದ್ದು.
 9. ಈ ಯೋಜನೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡುವುದು.
 10. ಈ ಯೋಜನೆಯಲ್ಲಿ ಮಂಗಳಮುಖಿಯರಿಗೂ ಸಹ ಆದ್ಯತೆ ನೀಡುವುದು.
 11. ಈ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಫಲಾನುಭವಿಯು ಸ್ವಯಂ ಟ್ಯಾಕ್ಸಿ ಚಾಲನೆ (Yellow Board) ಉದ್ದೇಶಕ್ಕೆ ವಾಹನವನ್ನು ನೋಂದಾಯಿಸತಕ್ಕದ್ದು.
 1. ಸಹಾಯಧನದ ಮೊತ್ತ:

  ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರಗಳ ವಾಹನವನ್ನು ಖರೀದಿಸಲು ರಾಷ್ಟ್ರೀಕೃತ ಬ್ಯಾಂಕ್‌/ಗ್ರಾಮೀಣ ಬ್ಯಾಂಕ್‌ಗಳು ಮಂಜೂರು ಮಾಡಿದ ಸಾಲಕ್ಕೆ ಶೇ.50ರಷ್ಟು ಅಥವಾ ಗರಿಷ್ಠ ರೂ.3.00 ಲಕ್ಷಗಳವರೆಗೆ ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡಲಾಗುವುದು. ಬ್ಯಾಂಕ್‌ ಪಾಲಿನ ಸಾಲಕ್ಕೆ ಬ್ಯಾಂಕ್‌ ನಿಗಧಿಪಡಿಸುವ ಚಾಲ್ತಿ ದರದ ಬಡ್ಡಿಯೊಂದಿಗೆ ಸಾಲದ ಮೊತ್ತವನ್ನು ನಿಗದಿತ ಕಂತುಗಳಲ್ಲಿ ಮರು ಪಾವತಿಸಬೇಕು.

 1. ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:

ಅರ್ಜಿದಾರರು ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವಾಗ ಈ ಕೆಳಕಂಡ ಅಗತ್ಯ ದಾಖಲೆಗಳನ್ನು ಸಲ್ಲಿಸತಕ್ಕದ್ದು.

 ಸರ್ಕಾರದ ಆದೇಶ ಸಂ.ಹಿಂವಕ 31 ಸಮನ್ವಯ 2013, ದಿನಾಂಕ:25.02.2013 ರನ್ವಯ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈ ಕೆಳಕಂಡಂತೆ ರಚಿಸಿರುವ ಸಮಿತಿಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುವುದು.

ಕ್ರ.ಸಂ

ಅಧಿಕಾರಿಗಳು

ಪದನಾಮ

1

ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್

ಅಧ್ಯಕ್ಷರು

2

ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರು

ಸದಸ್ಯರು

3

ಪ್ರಾದೇಶಿಕ ಸಾರಿಗೆ ಅಧಿಕಾರಿ/ಪ್ರತಿನಿಧಿ

ಸದಸ್ಯರು

4

ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಸದಸ್ಯರು

5

ನಿಗಮದ ಜಿಲ್ಲಾ ವ್ಯವಸ್ಥಾಪಕರು

ಸದಸ್ಯರು ಕಾರ್ಯದರ್ಶಿ

 1. ಮೀಸಲಾತಿ:

              ಈ ಯೋಜನೆಯಲ್ಲಿ  ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಪ್ರವರ್ಗ-1 ಮತ್ತು 2ಎ ಗೆ ಶೇ.85 ರಷ್ಟು ಪ್ರವರ್ಗ-3ಎ ಮತ್ತು 3ಬಿ ಗೆ ಶೇ.15ರಷ್ಟು ಮೀಸಲಾತಿ ನಿಗಧಿಪಡಿಸಿದೆ. ಇನ್ನುಳಿದನಿಗಮಗಳಲ್ಲಿ ಆಯಾ ನಿಗಮದ ವ್ಯಾಪ್ತಿಗೆ ಬರುವ ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡತಕ್ಕದ್ದು.

 1. ಸಾಲ ಮಂಜೂರಾತಿಯ ವಿಧಾನ:

         ನಿಗಮಗಳಿಂದ ಈ ಯೋಜನೆಯಲ್ಲಿ ಸೌಲಭ್ಯ ಒದಗಿಸಲು ಅರ್ಜಿದಾರರಿಂದ ಸೇವಾ ಸಿಂಧು ಪೋರ್ಟಲ್‌ ಮುಖಾಂತರ ಆನ್‌ ಲೈನ್‌ ನಲ್ಲಿ ಅರ್ಜಿಗಳನ್ನು ಆಹ್ವಾನಿಸಿ ಪತ್ರಿಕಾ ಪ್ರಕಟಣೆ ಹೊರಡಿಸುವುದು.ಜಿಲ್ಲಾ ವ್ಯವಸ್ಥಾಪಕರು ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ ಮಾನ್ಯ ಶಾಸಕರು/ಜಿಲ್ಲಾ ಪಂಚಾಯತ್‌ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಇವರುಗಳ ಅಧ್ಯಕ್ಷತೆಯಲ್ಲಿನ ಆಯ್ಕೆ ಸಮಿತಿಯ ಮುಂದೆ ಮಂಡಿಸಿ, ಆಯಾ ಜಿಲ್ಲೆಗೆ/ವಿಧಾನಸಭಾ ಕ್ಷೇತ್ರಕ್ಕೆ ನಿಗಧಿಪಡಿಸಿದ ಗುರಿಯಂತೆ ಆಯ್ಕೆ ಸಮಿತಿಯ ಮೂಲಕ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ವಾಹನ ಖರೀದಿಸುವ ದರಪಟ್ಟಿಯೊಂದಿಗೆ ಸಾಲ ಮಂಜೂರಾತಿಗಾಗಿ ರಾಷ್ಟ್ರೀಕೃತ ಬ್ಯಾಂಕ್‌ ಗಳಿಗೆ ಶಿಫಾರಸ್ಸು ಮಾಡಬೇಕು.

 ಸದರಿ ಬ್ಯಾಂಕ್‌ ಶಾಖೆಯವರು ಈ ಅರ್ಜಿಗಳನ್ನು ಪರಿಶೀಲಿಸಿ ಸಾಲ ಮಂಜೂರಾತಿಗೆ ಪರಿಗಣಿಸಿ ಸಾಲ ಮಂಜೂರು ಮಾಡಿ, ನಿಗಮಗಳಿಂದ ಸಹಾಯಧನ ಬಿಡುಗಡೆಗೆ ಕೋರಿರುವ ಪ್ರಸ್ತಾವನೆಗಳನ್ನು ಮಂಜೂರಾತಿ ಪತ್ರ/ಕ್ಲೈಮ್‌ ಪತ್ರದೊಂದಿಗೆ ಆನ್‌ ಲೈನ್‌ ನಲ್ಲಿ ಜಿಲ್ಲಾ ವ್ಯವಸ್ಥಾಪಕರಿಗೆ ಕಳುಹಿಸುವುದು.

 

 1. ಸಾಲ ವಿತರಣೆ ಮತ್ತು ಘಟಕ ತಪಾಸಣೆ:

            ಜಿಲ್ಲಾ ವ್ಯವಸ್ಥಾಪಕರು ಆನ್‌ ಲೈನ್‌ ನಲ್ಲಿ ಸ್ವೀಕರಿಸಿರುವ ದಾಖಲೆಗಳನ್ನು ವಿಸ್ವಾಸ್‌ ತಂತ್ರಾಂಶದಲ್ಲಿ ಅಪ್ಲೋಡ್‌ ಮಾಡಿ L-1, L-2, L-3 ಆದ ವ್ಯವಸ್ಥಾಪಕ ನಿರ್ದೇಶಕರಿಗೆ ಕಳುಹಿಸುವುದು. ಕೇಂದ್ರ ಕಛೇರಿಯಲ್ಲಿ ದಾಖಲೆಗಳೊಂದಿಗೆ  ಪ್ರಸ್ತಾವನೆಯನ್ನು ಪರಿಶೀಲಿಸಿ ಸಾಲ ಮಂಜೂರು ಮಾಡಿದ ಬ್ಯಾಂಕ್‌ ಶಾಖೆಗೆ ಫಲಾನುಭವಿಯು ವಾಹನ ಖರೀದಿಸಿದ ಬಗ್ಗೆ ಆರ್.ಸಿ.ಪುಸ್ತಕ, ಟ್ಯಾಕ್ಸ್‌ ಪಾವತಿ ರಸೀದಿ/ವಿಮಾ ಪಾವತಿ ರಸೀದಿ ಇತ್ಯಾದಿ ದಾಖಲೆಗಳ ಪ್ರತಿಗಳನ್ನು ಒದಗಿಸಿದ ನಂತರ ಅರ್ಜಿದಾರರ ಆಧಾರ್‌ ಸಂಯೋಜನಿತ ಬ್ಯಾಂಕ್‌ ಖಾತೆಗೆ DBT(Direct Benefit Transfer) ಮೂಲಕ ಸಹಾಯಧನವನ್ನು ಬಿಡುಗಡೆ ಮಾಡುವುದು.

ವಾಹನ ಸರಬರಾಜುದಾರರು ವಾಹನವನ್ನು ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಸ್ವಾವಲಂಬಿ ಸಾರಥಿ/ಟ್ಯಾಕ್ಸಿ ಉದ್ದೇಶಕ್ಕೆ Yellow Board ಗೆ ನೋಂದಾಯಿಸಿ ವಿತರಿಸಬೇಕು.

ಬ್ಯಾಂಕ್‌ ಸೂಚನೆ ಮೇರೆಗೆ ನೋಂದಣಿ ವೆಚ್ಚ/ವಿಮಾ ಮೊತ್ತವನ್ನು ಫಲಾನುಭವಿಯು ಭರಿಸಬೇಕು. ವಿಮೆಯನ್ನು ಫಲಾನುಭವಿಯು ಪ್ರತಿ ವರ್ಷ ನವೀಕರಿಸತಕ್ಕದ್ದು.

ಫಲಾನುಭವಿಯು ಖರೀದಿಸಿದ ನಾಲ್ಕು ಚಕ್ರದ ವಾಹನದ ಮೇಲೆ ಆರ್ಥಿಕ ನೆರವು…………………ಬ್ಯಾಂಕ್‌ ಮತ್ತು…………. ನಿಗಮ ನಿಯಮಿತ…………. ಜಿಲ್ಲೆ ಎಂದು ನಮೂದಿಸಬೇಕು.

 1. ಖರೀಸಿದ ವಾಹನದ ಆರ್.ಸಿ. ಪುಸ್ತಕ, ಟ್ಯಾಕ್ಸ್‌ ಪಾವತಿ ರಸೀದಿ/ವಿಮಾ ಪಾವತಿ ರಸೀದಿ ಇತ್ಯಾದಿ ದಾಖಲೆಗಳ ಜೆರಾಕ್ಸ್‌ ಪ್ರತಿಯನ್ನು ಜಿಲ್ಲಾ ವ್ಯವಸ್ಥಾಪಕರು ಸಂಗ್ರಹಿಸಿ ಇಡಬೇಕು.

    ಈ ಯೋಜನೆಯಲ್ಲಿ ಖರೀದಿಸಿದ ವಾಹನವನ್ನು ಸಾಲ ತೀರುವಳಿ ಆಗುವವರೆಗೂ ಮಾರಾಟ ಮಾಡಲು ಅಥವಾ ಟ್ಯಾಕ್ಸಿಯಿಂದ Yellow Board ಸ್ವಂತಕ್ಕೆ (White Board) ಬದಲಿಸಲು ಅವಕಾಶ ಇರುವುದಿಲ್ಲ.

 

 1. ಸಾಲ/ಸಹಾಯಧನ ಖಾತಾ ಪುಸ್ತಕ ನಿರ್ವಹಣೆ:

     ಫಲಾನುಭವಿಗಳಿಗೆ ಬಿಡುಗಡೆಯಾದ ಸಹಾಯಧನದ ಪೂರ್ಣ ವಿವರಗಳನ್ನು ಮಂಜೂರಾತಿ ಆದೇಶ ಪತ್ರದಲ್ಲಿ ತಿಳಿಸಿರುವಂತೆ ನಿಗಮದ ಖಾತಾ ಪುಸ್ತಕದಲ್ಲಿ ದಾಖಲಿಸಿ ನಿರ್ವಹಿಸುವುದು.

 1. ಸಾಲದ ಮರುಪಾವತಿ:

    ಈ ಯೋಜನೆಯಲ್ಲಿ ಬ್ಯಾಂಕುಗಳಿಂದ ಪಡೆದ ಸಾಲವನ್ನು ಬ್ಯಾಂಕ್‌ ಶಾಖೆಯವರು ನಿಗಧಿಪಡಿಸಿದ ಕಂತುಗಳನ್ವಯ ಅಸಲು ಮತ್ತು ಬಡ್ಡಿಯನ್ನು ಫಲಾನುಭವಿಗಳು ಬ್ಯಾಂಕ್ ಗಳಿಗೆ ಮರುಪಾವತಿಸಬೇಕು.

 1. ಈ ಯೋಜನೆ ಅನುಷ್ಟಾನಕ್ಕೆ ಕಾಲಕಾಲಕ್ಕೆ ಅಗತ್ಯವಿರುವ ತಿದ್ದುಪಡಿ/ಮಾರ್ಪಾಡು ಅಥವಾ ಸೇರ್ಪಡೆ ಇತ್ಯಾದಿಗಳನ್ನು ಮಾಡಲು ನಿರ್ದೇಶಕ ಮಂಡಳಿಯು ಅಧಿಕಾರ ಹೊಂದಿರುತ್ತದೆ. ಹಾಲಿ ನಿಯಮಗಳಡಿಯಲ್ಲಿ ಯೋಜನೆಯನ್ನು ಅನುಷ್ಟಾನಗೊಳಿಸುವಾಗ ಉದ್ಭವವಾಗುವ ಸಂಶಯಗಳನ್ನು ನಿವಾರಿಸಲು/ಸ್ಷಷ್ಠೀಕರಣ ನೀಡಲು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಅಧಿಕಾರ ಹೊಂದಿರುತ್ತಾರೆ.
×
ABOUT DULT ORGANISATIONAL STRUCTURE PROJECTS